ಅಳದಂಗಡಿ: ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಸೈಂಟ್ ಪೀಟರ್ ಕ್ಲೇವರ್ ಆಂಗ್ಲಮಾಧ್ಯಮ ಶಾಲೆಗೆ ಡಿ. 7ರಂದು ಆಂಟಿ ಬೊಕ್ಕ ಅಂಕಲ್ ಬರಲಿದ್ದಾರೆ.
ಹೌದು, ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಈ ಶಾಲೆಯಲ್ಲಿ ಡಿ. 7ರಂದು ಆಂಟಿ ಬೊಕ್ಕ ಅಂಕಲ್ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಸೈಂಟ್ ಪೀಟರ್ ಕ್ಲೇವರ್ ವಿಶಂತಿ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಾಯಾರ್ಥವಾಗಿ ಈ ನಾಟಕ ಹಮ್ಮಿಕೊಳ್ಳಲಾಗಿದ್ದು, ಟಿಕೆಟ್ ದರ ನಿಗದಿ ಪಡಿಸಲಾಗಿದೆ.
ಲ. ಕಿಶೋರ್ ಡಿ. ಶೆಟ್ಟಿಯವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಅಭಿನಯಿಸುವ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಬಿಂದಾಸ್ ಪಾತ್ರದಲ್ಲಿ ಈ ತುಳು ಹಾಸ್ಯಮಯ ನಾಟಕ ಪ್ರದರ್ಶಗೊಳ್ಳಲಿದೆ. ಮುಂಗಡ ಟಿಕೆಟ್ಗಾಗಿ ಶಾಲಾ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.





