ಫುಟ್ಬಾಲ್ ಸ್ಟೇಡಿಯಂ ಪಿಚ್ ನಲ್ಲಿ ಅಭಿಮಾನಿಗಳ ದಾಳಿ  ಕಾಲ್ತುಳಿತಕ್ಕೆ 127 ಜನ ಸಾವು

ಫುಟ್ಬಾಲ್ ಸ್ಟೇಡಿಯಂ ಪಿಚ್ ನಲ್ಲಿ ಅಭಿಮಾನಿಗಳ ದಾಳಿ ಕಾಲ್ತುಳಿತಕ್ಕೆ 127 ಜನ ಸಾವು

Listen to this article

ಮಲಾಂಗ್: ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ಪಿಚ್ ಮೇಲೆ ದಾಳಿ ನಡೆಸಿದಾಗ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ  ಪೂರ್ವ ಮಲಾಂಗ್ ನ ಕಂಜುರುಹಾನ್ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಸುರಬಯಾ ವಿರುದ್ಧ 3-2 ಅಂತರದಿಂದ ಅರೆಮಾ ಎಫ್‌ಸಿ  ಪರ್ಸೆಬಯಾ ತಂಡ ಸೋತ ನಂತರ ಆ ತಂಡದ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದ್ದು, ಇಬ್ಬರು ಅಧಿಕಾರಿಗಳು ಹತ್ಯೆಯಾದ ನಂತರ ಆಶ್ರುವಾಯು ಸಿಡಿಸಿದ್ದಾರೆ. ಕಾಲ್ತುಳಿತದಲ್ಲಿ ಅನೇಕ ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 

 

ಈ ಹಿಂಸಾಚಾರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 34 ಜನರು ಕ್ರೀಡಾಂಗಣದೊಳಗೆ ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಂದು ಪ್ರವೇಶ ದ್ವಾರದಲ್ಲಿ ಗುಂಪಾಗಿ ಜನರು ಓಡಿದಾಗ ಅನೇಕ ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಭಾರೀ ಪ್ರಮಾಣದ ಆಶ್ರುವಾಯು ಹಾಗೂ ಜನರು ಬೇಲಿಗಳನ್ನು ಹತ್ತುತ್ತಿರುವುದನ್ನು ಕ್ರೀಡಾಂಗಣದ  ಒಳಗಿನಿಂದ ಸೆರೆಹಿಡಿಯಲಾದ ಚಿತ್ರಗಳು ತೋರಿಸಿವೆ.

Trending Now

Leave a Reply

Your email address will not be published. Required fields are marked *

Trending Now