ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ವಿಶ್ವ ಸಂಸ್ಥೆ ಬಿಚ್ಚಿಟ್ಟ ಸತ್ಯವೇನು?

 

 

 

ಡಿಸೆಂಬರ್‌ 08: “ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್‌ ಈ ಹಿಂದಿನ ರೂಪಾಂತರಗಳಂತೆ ಅಧಿಕ ಗಂಭೀರವಾದ ರೋಗ ಲಕ್ಷಣವನ್ನು ಅಥವಾ ಪರಿಣಾಮವನ್ನು ಉಂಟು ಮಾಡುವುದಿಲ್ಲ, ಇದು ಕೋವಿಡ್‌ ಲಸಿಕೆಯ ರಕ್ಷಣೆಯಿಂದ ಕಡಿಮೆ ಮಾಡುವುದು ಅತೀ ಅಸಂಭವ. ಓಮಿಕ್ರಾನ್‌ ಕೋವಿಡ್‌ ಲಸಿಕೆಯ ರಕ್ಷಣೆಯನ್ನು ಕುಗ್ಗಿಸುವುದಿಲ್ಲ,” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಎಫ್‌ಪಿಗೆ ಮಾಹಿತಿ ನೀಡಿದೆ. “ಈ ಹೊಸ ರೂಪಾಂತರ ಓಮಿಕ್ರಾನ್‌ ಬಗ್ಗೆ ಇನ್ನೂ ಹಲವಾರು ವಿಚಾರವನ್ನು ನಾವು ತಿಳಿದು ಕೊಳ್ಳುವುದು ಬಾಕಿ ಉಳಿದಿದೆ. ಆದರೆ ಈ ಅಧಿಕವಾಗಿ ತಳಿಗಳನ್ನು ಹೊಂದಿರುವ ಕೋವಿಡ್‌ ರೂಪಾಂತರ ಓಮಿಕ್ರಾನ್‌ ಡೆಲ್ಟಾ ಹಾಗೂ ಇತರೆ ರೂಪಾಂತರಕ್ಕಿಂತ ಅಧಿಕವಾಗಿ ಜನರನ್ನು ಗಂಭೀರ ಅನಾರೋಗ್ಯಕ್ಕೆ ಒಳಪಡಿಸಲ್ಲ ಎಂಬುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ,” ಎಂದು ತಿಳಿಸಿದೆ.

Omicron Highly Unlikely To Fully Dodge Vaccine Protection Says WHO

ಕೋವಿಡ್‌ ಲಸಿಕೆಯ ರಕ್ಷಣೆಯನ್ನು ಕುಗ್ಗಿಸಲ್ಲ ಓಮಿಕ್ರಾನ್‌

“ಓಮಿಕ್ರಾನ್‌ ಕೊರೊನಾ ಲಸಿಕೆಯ ರಕ್ಷಣೆಯನ್ನು ಕುಗ್ಗಿಸಲ್ಲ,” ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. “ಎಲ್ಲಾ ಕೋವಿಡ್‌ ರೂಪಾಂತರಗಳ ವಿರುದ್ಧವಾಗಿ ಸಫಲವಾಗಿ ಕಾರ್ಯನಿರ್ವಹಣೆ ಮಾಡುವ ಕೊರೊನಾ ಲಸಿಕೆಯನ್ನು ನಾವು ಹೊಂದಿದ್ದೇವೆ. ಪ್ರಸ್ತುತ ಲಭ್ಯವಿರುವ ಕೋವಿಡ್ ಲಸಿಕೆಯು ಗಂಭೀರ ಅನಾರೋಗ್ಯ ಹಾಗೂ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿಯನ್ನು ಕಡಿಮೆ ಮಾಡುತ್ತದೆ,” ಎಂದು ಕೂಡಾ ವಿಶ್ವ ಆರೋಗ್ಯ ಸಂಸ್ಥೆಯು ಉಲ್ಲೇಖ ಮಾಡಿದೆ.

“ಓಮಿಕ್ರಾನ್‌ ಗಂಭೀರ ಆಗುತ್ತದೆ ಎಂದು ಹೇಳಲು ಯಾವುದೇ ಸಾಕ್ಷಿಗಳು ಇಲ್ಲ. ದಕ್ಷಿಣ ಆಫ್ರಿಕಾದ ಆರಂಭಿಕ ಡೇಟಾವನ್ನು ನಾವು ನೋಡಿದಾಗ ಕೋವಿಡ್‌ ಲಸಿಕೆಗಳು ಕನಿಷ್ಠ ರೋಗದ ಗಂಭೀರತೆಯನ್ನು ತಡೆಗಟ್ಟುತ್ತದೆ ಎಂಬುವುದು ದೃಢಪಡುತ್ತದೆ,” ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಮೈಕೆಲ್ ರಯಾನ್ ಉಲ್ಲೇಖಿಸಿದ್ದಾರೆ

[t4b-ticker]

You May Also Like

More From Author

+ There are no comments

Add yours