ವಿಕಲಚೇತನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ

 

ಚಿತ್ರದುರ್ಗ, ಡಿಸೆಂಬರ್ 07:
2021-22ನೇ ಸಾಲಿನಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಸ್ಟೇಟ್ ಸ್ಕಾಲರ್‍ಶಿಫ್ ಫೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಕಲಚೇತನ ವಿದ್ಯಾರ್ಥಿಗಳು http://ssp.karnataka.gov.in  ಫೋರ್ಟಲ್‍ನಲ್ಲಿ ಪ್ರೀ ಮೆಟ್ರಿಕ್ ಅರ್ಜಿಗಳನ್ನು ಹಾಗೂ http://ssp.postmatric.karnataka.gov.in/ಫೋರ್ಟಲ್‍ನಲ್ಲಿ ಫೋಸ್ಟ್ ಮೆಟ್ರಿಕ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಈ ವೆಬ್‍ಸೈಟ್ ವಿಳಾಸದಲ್ಲಿ ಅರ್ಜಿ ಸಲ್ಲಿಸಿ ಅರ್ಜಿಯ ಒಂದು ಪ್ರತಿಯನ್ನು ತಮ್ಮ ವ್ಯಾಪ್ತಿಗೊಳಪಡುವ ಗ್ರಾಮೀಣ, ನಗರ, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರಲ್ಲಿ ನೀಡಲು ಕೋರಿದೆ.
ಮಾಹಿತಿಗಾಗಿ ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ಎನ್. ಮೈಲಾರಪ್ಪ 9880821934, ಚಳ್ಳಕೆರೆ ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ನರಸಿಂಹ ಮೂರ್ತಿ 9611266930, ಹಿರಿಯೂರು ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ಕೆ.ಬಸವರಾಜ್ 9902888901, ಹೊಳಲ್ಕೆರೆ ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ರಾಘವೇಂದ್ರ 9740030227, ಹೊಸದುರ್ಗ ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ಫಯಾಜ್ ಅಹಮ್ಮದ್ 9741829990, ಮೊಳಕಾಲ್ಮೂರು ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ದಾದಾಪೀರ್ 9742725576 ಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳ ಕಚೇರಿ, ಬಾಲಭವನ ಆವರಣ, ಸ್ಟೇಡಿಯಂ ಹತ್ತಿರ ಚಿತ್ರದುರ್ಗ ದೂರವಾಣಿ ಸಂಖ್ಯೆ 08194-235284ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours