ಮಕ್ಕಳಿಗೂ ಸಹ ಸೆಪ್ಟಂಬರ್ ವೇಳೆಗೆ ಕೊವಾಕ್ಸಿನ್ ಲಸಿಕೆ

 

ನವದೆಹಲಿ,ಜೂ.೨೩- ಕೊರೊನಾ ೩ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸಾವು ನೋವು ಸಂಭವಿಸಬಹುದು ಎಂಬ ಕಾರಣಕ್ಕೆ  ತಜ್ಞರ ಎಚ್ಚರಿಕೆಗಳು ಆತಂಕ ಉಂಟು ಮಾಡಿರುವ ನಡುವೆಯೇ ಮಕ್ಕಳಿಗೆ ಶೀಘ್ರ ಲಸಿಕೆ ಲಭ್ಯವಾಗುವ ಸಿಹಿ ಸುದ್ದಿ ಹೊರ ಹಾಕಿದ್ದಾರೆ. ಬರುವ ಸೆಪ್ಟೆಂಬರ್ ವೇಳೆಗೆ ೨ ವರ್ಷ ಮೇಲ್ಟಟ್ಟ ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ಸಿಗಲಿದೆ.

ಸ್ವದೇಶಿ ಔಷಧ ತಯಾರಿಕಾ ಸಂಸ್ಥೆಯಾದ ಭಾರತ್ ಬಯೋಟೆಕ್ ಕೋವಿಡ್ ಗೆ  ಅಭಿವೃದ್ಧಿಗೊಳ್ಳಿಸಿರುವ ಕೊವಾಕ್ಸಿನ್ ಲಸಿಕೆಯನ್ನು ಮಕ್ಕಳಿಗೂ ನೀಡುವ ಬಗ್ಗೆ ಏಮ್ಸ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, ಸೆಪ್ಟೆಂಬರ್‌ನಲ್ಲಿ ಕೊವಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಗಲಿದೆ.

ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್)ನ ನಿರ್ದೇಶಕ ಹಾಗೂ ಕೇಂದ್ರ ಸರ್ಕಾರದ ಕೋವಿಡ್-19 ಕಾರ್ಯಪಡೆಯ ಸದಸ್ಯರೂ ಆಗಿರುವ ಡಾ. ರಣದೀಪ್ ಗುಲೇರಿಯಾ ಅವರು ಸೆಪ್ಟೆಂಬರ್‌ನಲ್ಲಿ ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ನೀಡಲು ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಭಾರತ್ ಬಯೋಟೆಕ್ ಕೊವಾಕ್ಸಿನ್ ಲಸಿಕೆಯನ್ನು ನೀಡುವ ಬಗ್ಗೆ 2 ಮತ್ತು 3ನೇ ಹಂತದ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದು, ಈ ಪರೀಕ್ಷೆಯ ವರದಿಗಳು ಸೆಪ್ಟೆಂಬರ್‌ನಲ್ಲಿ ಹೊರ ಬರಲಿವೆ. ಆ  ತಿಂಗಳು ಮಕ್ಕಳಿಗೆ ಕೊವಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ಪಡೆದು ಲಸಿಕೆ ನೀಡಿಕೆ ಆರಂಭಿಸಲಾಗುವುದು ಎಂದು ತಿಳಿಸಿದರು.

2  ವರ್ಷ ಮೇಲ್ಪಟ್ಟ 18  ವರ್ಷ ಒಳಗಿನವರಿಗೆ ಕೊವಾಕ್ಸಿನ್ ಲಸಿಕೆ ನೀಡುವ ಸಂಬಂಧ ಪ್ರಾಯೋಗಿಕ ಪರೀಕ್ಷೆಗಳನ್ನು ಆರಂಭಿಸಲು ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ ಕಳೆದ ಮೇ 12 ರಂದು ಭಾರತ್ ಬಯೋಟೆಕ್ ಸಂಸ್ಥೆಗೆ ಒಪ್ಪಿಗೆ ಸಹ  ನೀಡಿತ್ತು. ಅದರಂತೆ ಜೂ. 7 ರಿಂದ ನವದೆಹಲಿಯ ಏಮ್ಸ್‌ನಲ್ಲಿ 2 ರಿಂದ 18 ವರ್ಷದ ಮಕ್ಕಳ ಮೇಲೆ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದ್ದು, ಈ ಪರೀಕ್ಷೆಗಳಲ್ಲಿ ಮಕ್ಕಳಲ್ಲೂ ಪ್ರತಿಕಾಯ ಶಕ್ತಿ ವೃದ್ಧಿಯಾಗಿರುವುದನ್ನು ಕಂಡುಕೊಳ್ಳಲಾಗಿದೆ. ಪೂರ್ಣ ಪ್ರಮಾಣದ ಪ್ರಾಯೋಗಿಕ ವಿವರಗಳ ವರದಿ ಲಭ್ಯವಾಗಿ ಅಂಕಿ ಅಂಶ ಸಲ್ಲಿಸಿದ ನಂತರ ಲಸಿಕೆಯನ್ನು ಬಳಸಲು ಐಸಿಎಂಆರ್ ಅನುಮೋದನೆ ನೀಡಲಿದೆ.
ಫೈಜರ್ ಬಯೋ ಎನ್‌ಟೆಕ್‌ನ ಲಸಿಕೆಗೂ ಭಾರತದಲ್ಲಿ ಒಪ್ಪಿಗೆ ಸಿಕ್ಕರೆ ಅದು ಸಹ ಮಕ್ಕಳಿಗೆ ನೀಡಲು ಆಯ್ಕೆಯಾಗಬಹುದು ಎಂದು ಡಾ. ಗುಲೇರಿಯಾ ಮಕ್ಕಳ ಬಗ್ಗೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಬಿಚ್ಚಿಟ್ಟಿದ್ದಾರೆ.

[t4b-ticker]

You May Also Like

More From Author

+ There are no comments

Add yours