ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ, ಮೂವರ ಬಂಧನ ಇಬ್ಬರಿಗೆ‌ ಶೋಧ.

 

ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಶಿವಮೊಗ್ಗದಿಂದ ಬೇರೆ ಕಡೆ ವ್ಯಾಪಿಸಲು ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಹರ್ಷನ ಅಂತಿಮ ವಿದಿವಿಧಾನ ನೆರವೇರಿದೆ. ಮೆರವಣಿಗೆ ವೇಳೆ ಸ್ವಲ್ಪ ಗಲಾಟೆ ನಡೆದಿದ್ದು ಎಡಿಜಿಪಿ ಮುರುಗನ್ ಸ್ಥಳದಲ್ಲಿದ್ದು ಪರಿಸ್ಥಿತಿಯ ನಿಗಾ ವಹಿಸಿದ್ದಾರೆ ಎಂದರು.
ಕೊಲೆಯಾದ ಹರ್ಷ ತಂದೆ-ತಾಯಿಗೆ ಸಾಂತ್ವನ ಹೇಳಿದ್ದೇನೆ. ನ್ಯಾಯ ದೊರಕಿಸಿ ಎಂದು ಕೇಳಿಕೊಂಡಿದ್ದಾರೆ. ಘಟನೆ ಸಂಬಂಧ ಬಂಧಿತ ಮೂವರು ಎಲ್ಲಿಯವರು ಎನ್ನುವುದನ್ನು ಹೇಳಲಾಗದು.ಐವರು ಸೇರಿ ಕೊಲೆ ಮಾಡಿದ್ದಾರೆ. ಇದರ ಹಿಂದೆ ಏನಾಗಿದೆ ಎಂದು ನೋಡಬೇಕು ತನಿಖೆ ಎಲ್ಲಾ ಆಯಾಮದಲ್ಲಿ ನಡೆದಿದೆ ಎಂದು ತಿಳಿಸಿದರು.
ಪೊಲೀಸರ ಕೈಯಲ್ಲಿ ಲಾಠಿ ಇತ್ತು. ಇನ್ನಷ್ಟು ದಾಳಿ ಮಾಡಿದರೆ ಹಾನಿ ಆಗಲಿದೆ. ಕೊಲೆ ಮಾಡಿದವರ ಎಲ್ಲರ ಬಗ್ಗೆ ಮಾಹಿತಿ ಇದೆ. ಎಲ್ಲಾ ಜಿಲ್ಲೆಗಳಿಗೆ ಅಲರ್ಟ್ ಇರುವಂತೆ ಸೂಚನೆ ಕೊಟ್ಟಿದ್ದೇವೆ. ಎಂದರು.
ಯಾವುದೇ ಸಂಘಟನೆ ಬ್ಯಾನ್ ವಿಚಾರ ಅನೇಕ ಕ್ರೈಟಿರಿಯಾ ಇದೆ. ಸಮಯ ಬಂದಾಗ ಬ್ಯಾನ್ ಮಾಡುವ ಬಗ್ಗೆ ನೋಡೋಣ, ಮಾಡಿ ತೋರಿಸ್ತೇವೆ. ಈ ಪ್ರಕರಣ ಸಂಬಂಧ ಎನ್‍ಐಎ ತನಿಖೆಗೆ ಶೋಭಾ ಕರಂದ್ಲಾಜೆ ಹಾಗೂ ಮೈಸೂರು ಸಂಸದರು ಹೇಳಿದ್ದಾರೆ ನೋಡೋಣ ಎಂದು ಹೇಳಿದ್ದಾರೆ. ಇದೇ ವೇಳೆ ಸಚಿವ ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಈ ಸಂದರ್ಭದಲ್ಲಿ ಭಾವುಕರಾಗಿ ಮಾತಾನಾಡಿದ್ದಾರೆ ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours