ಪುನೀತ್ ಅವರ ಜೆಮ್ಸ್ ಸಿನಿಮಾ ಸಾಕು ಥಿಯೇಟರ್ ನಿಂದ ತೆಗೆಯಿರಿ ಅಂತ ಹೇಳಿದ್ಯಾರು ಗೊತ್ತೆ ?

 

ಬೆಂಗಳೂರು, ಮಾರ್ಚ್ 22: ಕರ್ನಾಟಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಜೇಮ್ಸ್ ಸಿನಿಮಾ ಸಖತ್ ಹಿಟ್ ಆಗಿ ಓಡುತ್ತಿದೆ. ಇದರ ಮಧ್ಯೆ ಆ ಸಿನಿಮಾವನ್ನು ಥಿಯೇಟರ್ ನಿಂದ ತೆಗೆಯುವಂತೆ ಬಿಜೆಪಿ ಶಾಸಕರು ಹಾಗೂ ಕೆಲವೆಡೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿಧಾನಸೌಧದ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ಜೇಮ್ಸ್ ಸಿನಿಮಾದ ವಿರುದ್ಧ ಬಿಜೆಪಿ ನಾಯಕರು ಹುನ್ನಾರ ನಡೆಸುತ್ತಿದ್ದಾರೆ ಎಂದು ದೂಷಿಸಿದರು.

“ನಿನ್ನೆ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ನನ್ನನ್ನು ಭೇಟಿಯಾಗಿದ್ದರು. ಅನೇಕ ಕಡೆಗಳಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರು ಜೇಮ್ಸ್ ಚಿತ್ರ ಪ್ರದರ್ಶನ ನಡೆಯುತ್ತಿರುವ ಸಿನೆಮಾ ಮಂದಿರಕ್ಕೆ ಹೋಗಿ ನೀವು ಜೇಮ್ಸ್ ಚಿತ್ರ ಪ್ರದರ್ಶನ ನಿಲ್ಲಿಸಿ, ಕಾಶ್ಮೀರಿ ಫೈಲ್ಸ್ ಚಿತ್ರ ಹಾಕಿ ಎಂದು ಒತ್ತಡ ಹೇರುತ್ತಿದ್ದಾರೆ. ಕೆಲವೆಡೆ ಜೇಮ್ಸ್ ಚಿತ್ರ ಪ್ರದರ್ಶನವನ್ನೂ ನಿಲ್ಲಿಸಿದ್ದಾರೆ. ಅದೇ ರೀತಿ ಇನ್ನೂ ಹಲವಾರು ಕಡೆ ಒತ್ತಡ ಹಾಕುತ್ತಿದ್ದಾರೆ ಎಂದು ನೋವು ತೋಡಿ ಕೊಂಡರು,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ಜೇಮ್ಸ್ ನಿರ್ಮಾಪಕರು ಚಿತ್ರ ಬಿಡುಗಡೆಗೂ ಮೊದಲೇ ಚಿತ್ರಮಂದಿರಗಳನ್ನು ಬುಕ್ ಮಾಡಿಕೊಂಡಿದ್ದರು. ಅಲ್ಲದೇ ಮುಂಗಡ ಹಣ ಪಾವತಿಸಿ ಬಿಡುಗಡೆ ಮಾಡಿದ್ದರು. ಈಗ ಬಿಜೆಪಿಯವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿ ಜೇಮ್ಸ್ ಚಿತ್ರ ನಿಲ್ಲಿಸಿ ಎಂದು ಬಲವಂತ ಮಾಡುತ್ತಿರುವುದು ದೌರ್ಜನ್ಯ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸ್ಯಾಂಡಲ್‌ವುಡ್ ನಟ ಪುನೀತ್ ರಾಜ‍ಕುಮಾರ್ ಒಬ್ಬ ಸಮಾಜಮುಖಿ, ಪ್ರತಿಭಾನ್ವಿತರಾಗಿದ್ದವರು. ರಾಜ್ಯದಲ್ಲಿ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಕೊನೆ ಚಿತ್ರವನ್ನು ವೀಕ್ಷಿಸಬೇಕು ಎಂದು ಎಲ್ಲಾ ಅಭಿಮಾನಿಗಳಿಗೆ ಆಸೆ ಇದೆ. ಹೀಗಿರುವಾದಗ ಜೇಮ್ಸ್ ಚಿತ್ರ ತೆಗೆಸುತ್ತಿರುವ ಬಿಜೆಪಿ ಶಾಸಕರ ಯತ್ನಕ್ಕೆ ನನ್ನ ವಿರೋಧವಿದೆ. ಬಿಜೆಪಿಯವರು ತಮ್ಮನ್ನು ಸಜ್ಜನರು ಎಂದು ಹೇಳಿಕೊಂಡು ಇಂಥಾ ದೌರ್ಜನ್ಯದ ಕೆಲಸವನ್ನೇ ಮಾಡುತ್ತಿದ್ದಾರೆ. ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿರುವ ಶಾಸಕರ ಜೊತೆ ನಾನು ಮಾತನಾಡ್ತೇನೆ. ಯಾವೆಲ್ಲಾ ಟಾಕೀಸುಗಳು ಬುಕ್ ಆಗಿವೆ ಅಲ್ಲಿ ಸಿನಿಮಾ ತೋರಿಸಿ ಎಂದು ನಿಸಿಮಾ ನಿರ್ಮಾಪಕರಿಗೆ ಹೇಳಿದ್ದೇನೆ,” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

“ರಾಜ್ಯದಲ್ಲಿ ಆಸಕ್ತಿ ಇದ್ದವರು ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಲಿ, ನಮ್ಮದೇನು ವಿರೋಧ ಇಲ್ಲ. ಆದರೆ ಒಂದು ಸಿನಿಮಾ ಸ್ಥಗಿತಗೊಳಿಸಿ ಇನ್ನೊಂದು ಚಿತ್ರ ನೋಡಿ ಎಂದು ಜನರ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಈ ಹಿಂದೆ ಮಹಾತ್ಮ ಗಾಂಧಿ ಕುರಿತಾದ ಸಿನೆಮಾ ಬಂದಿತ್ತು, ಸಾಮಾಜಿಕ ಕಳಕಳಿಯ ಜೈ ಭೀಮ್ ಸಿನಿಮಾ ಬಂತು. ನಾವು ಯಾರಾದರೂ ಇತರರ ಮೇಲೆ ಸಿನಿಮಾ ನೋಡುವಂತೆ ಒತ್ತಡ ಹಾಕಿದ್ದೀವಾ?, ಆಸಕ್ತಿ ಇದ್ದವರು ನೋಡುತ್ತಾರೆ,” ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours