ಪತ್ರಕರ್ತ ಪ್ರಕಾಶ್ ರಾಮಜೋಗಿಹಳ್ಳಿ ಗೆ ವಿಶೇಷ ಪ್ರಶಸ್ತಿ

 

 

 

 

ಹೋರಾಟಗಾರ, ಸರಳ, ಸಜ್ಜನಿಕೆ ಸ್ವಭಾವ, ಸದಾ ಕ್ರಿಯಾಶೀಲ ವ್ಯಕ್ತಿತ್ವದ ಪತ್ರಕರ್ತ ಪ್ರಕಾಶ್ ರಾಮಜೋಗಿಹಳ್ಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬ ಸಂತೋಷ ಮತ್ತು ಖುಷಿಯ ವಿಚಾರವಾಗಿದೆ.

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು, ರಾಮಜೋಗಿಹಳ್ಳಿಯಲ್ಲಿ ಹುಟ್ಟಿ ಬೆಳೆದು ಚಿತ್ರದುರ್ಗ ನಗರದಲ್ಲಿ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದುಕೊಂಡೇ ಪದವಿ ಮುಗಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಸಮಸ್ಯೆಗಳಿಗೆ ಸ್ಪಂಧಿಸಿ ಹೋರಾಟಗಳನ್ನು ನಡೆಸಿದ ವ್ಯಕ್ತಿಯಾಗಿ ಬಯಲು ಸೀಮೆಯಲ್ಲಿ ಪರಿಚಿತರಾಗಿದ್ದಾರೆ.

ವಿದ್ಯಾರ್ಥಿ ದಿಶೆಯಲ್ಲಿಯೇ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಪ್ರಕಾಶ್ ಕಳೆದ 15 ವರ್ಷಗಳಿಂದ ಪತ್ರಕರ್ತರಾಗಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದವರು ಪತ್ರಕರ್ತನೆಂಬ ಅಹಂ ಇಲ್ಲದೆ ಸರಳವಾಗಿ ಗುರುತಿಸಿಕೊಂಡು ಬಂದವರು. ಕ್ರಿಯಾಶೀಲ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ ಹೆಸರುಗಳಿಸಿರುವ ಪ್ರಕಾಶ್ ವಾರ್ತ ಭಾರತಿ ಪತ್ರಿಕೆಯಲ್ಲಿ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ವೃತ್ತಿ ಮತ್ತು ಬರವಣಿಗೆ ನಿರಂತರ ಜನಪರ ಹೋರಾಟವೆಂದೇ ಹೇಳಬಹುದಾಗಿದೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ ತನ್ನ ಬರವಣಿಗೆಯನ್ನ ಬರೆಯುತ್ತ ಜನಮುಖಿ ಬರಹಗಾರರಾಗಿ ಹೊರಹೊಮ್ಮಿದ್ದಾರೆ.

ಹೋರಾಟ ಮತ್ತು ವೃತ್ತಿಯಲ್ಲಿ ಎಂದಿಗೂ ಹೆಸರು ಕೆಡಿಸಿಕೊಳ್ಳದೇ ಶುದ್ಧ ಅಸ್ತರಾಗಿ ಮತ್ತು ಶುದ್ಧ ಮನಸ್ಸಿನಿಂದ ಕಾರ್ಯಗಳನ್ನ ಮಾಡುತ್ತ ಬರುತ್ತಿರುವ, ಇವರು ಈ ದಿನಗಳಲ್ಲಿ ಅತೀ ಮುಖ್ಯ ಎನ್ನುವ ವ್ಯಕ್ತಿತ್ವವನ್ನ ಉಳಿಸಿಕೊಂಡಿದ್ದಾರೆ. ಇವರು ಹೋರಾಟದ ಹಿನ್ನೆಲೆಯಿಂದ ಪತ್ರಿಕಾ ರಂಗಕ್ಕೆ ಬಂದಿರುವುದರಿಂದ ಇಂತಹ ಉತ್ತಮ ಮತ್ತು ಶುದ್ಧ ವ್ಯಕ್ತಿತ್ವದ ವ್ಯಕ್ತಿಯಾಗಿ ಉಳಿದಿದ್ದಾರೆ.

ಪ್ರಶಸ್ತಿಗಳನ್ನು ಕೆಲವರು ಹುಡುಕಿಕೊಂಡು ಹೋಗುತ್ತಾರೆ. ಆದರೆ ಪ್ರಕಾಶ್‍ಗೆ ಪ್ರಶಸ್ತಿಗಳೇ ಹುಡುಕಿಕೊಂಡು ಬರುವ ಅನೇಕ ಸಂದರ್ಭಗಳು ಬಂದುಹೋಗಿವೆ, ಅವರು ಮನಸ್ಸು ಮಾಡಿದ್ದರೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾನಾ ಪ್ರಶಸ್ತಿಗಳನ್ನು ಪಡೆಯಬಹುದಾಗಿತ್ತು, ಆದರೆ ಅವರೆಂದಿಗೂ ಪ್ರಶಸ್ತಿ ಮತ್ತು ಸನ್ಮಾನದ ಹಿಂದೆ ಹೋಗದೆ ನಿರಂತರವಾಗಿ ತಿರಸ್ಕರಿಸುತ್ತಾ ಬಂದವರು. ಈಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅವರಿಗೆ ನೀಡುತ್ತಿರುವ ವಿಶೇಷ ಪ್ರಶಸ್ತಿ ಪಡೆಯುತ್ತಿರುವ ಪ್ರಕಾಶ್ ರಾಮಜೋಗಿಹಳ್ಳಿಗೆ ಜನಾಶಯ ಪ್ರಭ ಪತ್ರಿಕಾ ಬಳಗ ಅಭಿನಂದನೆಗಳನ್ನ ಸಲ್ಲಿಸುತ್ತಿದೆ…

[t4b-ticker]

You May Also Like

More From Author

+ There are no comments

Add yours