ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಶಾಸಕ ರಘುಮೂರ್ತಿ ಸೂಚನೆ ಮೇರೆಗೆ ತಡರಾತ್ರಿಯೇ ಪರಿಹಾರ ಕಾರ್ಯಗಳನ್ನು ಮಾಡಿದ ತಾಲೂಕು ಆಡಳಿತ…

 

ಚಳ್ಳಕೆರೆ:

ಚಳ್ಳಕೆರೆ ನಗರ ಸೇರಿದಂತೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಸೇರಿದಂತೆ ಕೆಲ ಭಾಗಗಳಲ್ಲಿ ಭಾನುವಾರ ತಡ ರಾತ್ರಿ ಬಿರುಸಿನ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಉಂಟಾಗಿದೆ.

ಚಳ್ಳಕೆರೆ ಪಟ್ಟಣದ ಅಭಿಷೇಕ್ ನಗರದಲ್ಲಿ ಭಾರಿ ಮಳೆಯಿಂದಾಗಿ ಕೆಲವೊಂದು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗುತ್ತಿದ್ದಂತೆ ವಿಷಯ ತಿಳಿದ ಶಾಸಕ ಟಿ.ರಘುಮೂರ್ತಿ ಅವರು ಸ್ಥಳಕ್ಕೆ ಧಾವಿಸಿ ಬಂದಿದ್ದು, ಕೂಡಲೇ ಪರಿಹಾರ ಕಾರ್ಯಗಳನನ್ನು ಮಾಡುವಂತೆ ತಾಲೂಕು ತಹಶೀಲ್ದಾರ್, ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಅಭಿಷೇಕ್ ನಗರ ಸೇರಿದಂತೆ ತಗ್ಗು ಪ್ರದೇಶಗಳ ಜನರನ್ನು ಸಮುದಾಯ ಭವನಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಜನರ ಸಮಸ್ಯೆಗಳನ್ನು ಶಾಸಕರು ಆಲಿಸಿದ್ದಾರೆ.

ತಡರಾತ್ರಿಯೇ ತಹಶೀಲ್ದಾರ್ ಮಲ್ಲಿಕಾರ್ಜುನ್, ನಗರಸಭೆ ಆಯುಕ್ತೆ ಶ್ಯಾಮಲಾ, ಇಂಜಿನಿಯರ್ ಲೋಕೇಶ್, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ್, ರಮೇಶ್ ಗೌಡ, ಬೆಸ್ಕಾಂ ಇಂಜಿನಿಯರ್ ತಿಮ್ಮರಾಜು ಮತ್ತಿತರ ಅಧಿಕಾರಿಗಳೊಂದಿಗೆ ಶಾಸಕರು ಸ್ಥಳದಲ್ಲೇ ಬೀಡು ಬಿಟ್ಟು ಪರಿಹಾರ ಕಾರ್ಯಗಳನ್ನು ಮಾಡಿಸಿದರು.

 

 

[t4b-ticker]

You May Also Like

More From Author

+ There are no comments

Add yours