ಕೋವಿಡ್19 ವಿರುದ್ದದ ಸಮರಕ್ಕೆ ಜನಸಹಕಾರ ಅಗತ್ಯ .ಶಾಸಕಿ ಕೆ. ಪೂರ್ಣಿಮ ಶ್ರೀನಿವಾಸ್

 

ಹಿರಿಯೂರು:
ತಾಲ್ಲೂಕಿನಲ್ಲಿ ಕರೋನಾ ರೋಗಕ್ಕೆ ತಡೆಯೊಡ್ಡಲು ಜನಸಹಕಾರವು ಅಮೂಲ್ಯ ಎಂದು ಶಾಸಕಿ ಕೆ ಪೂರ್ಣಿಮ ಶ್ರೀನಿವಾಸ್ ಹೇಳಿದರು
ಅವರು ಆದಿವಾಲ ಗ್ರಾಮದ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ಮಾಸ್ಕ್ ಗಳನ್ನ ವಿತರಿಸಿ ಮಾತನಾಡಿದರು ನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವೆಡೆ ಆಕ್ಸಿಜನ್ ಸಹಿತದ ಸರ್ಕಾರಿ ಐಸೋಲೇಷನ್ ಸೆಂಟರ್ ಗಳನ್ನ ತೆರೆಯಲಾಗಿದೆ ಕರೋನಾ ಬಾದಿತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ ಆರೈಕೆ ತಾಲ್ಲೂಕು ಆಡಳಿತ ಶ್ರಮಿಸುತ್ತಿದೆ ಜನ ಊಹಪೋಹಗಳಿಗೆ ಕಿವಿಗೊಡದೆ ಆಡಳಿತದೊಂದಿಗೆ ಸಹಕರಿಸಿ ಎಂದರು
ಮನೆ ಮನೆ ಸಮಿಕ್ಷೆಯ ಮೂಲಕ ರೋಗ ಲಕ್ಷಣಗಳಾದ ಕೆಮ್ಮು ನೆಗಡಿ ಜ್ವರವಿರುವವರಿಗೆ ಗುರುತಿಸಲಾಗಿರುವವರಿಗೆ ಪ್ರಾಥಮಿಕ ಹಂತದಲ್ಲಿ ಸೇವಿಸಲು ಸರ್ಕಾರ ಮಾತ್ರೆಗಳನ್ನ ವಿತರಿಸುತ್ತಿದ್ದು ಅ ಪ್ರಯುಕ್ತ ಸಮೀಕ್ಷೆಯ ಮೂಲಕ ಗುರುತಿಸಿರುವವರಿಗೆ ಮಾತ್ರೆಗಳನ್ನ ವಿತರಿಸಲಾಯಿತು
ಡಿ ಟಿ ಶ್ರೀನಿವಾಸ್ ಮಾತನಾಡಿ ಅಂಗನಾಡಿ ಆಶಾ ಆರೋಗ್ಯ ಇಲಾಖೆ ಸಿಬ್ಬಂದಿಗಳ ಶ್ರಮ ಮಹತ್ವಪೂರ್ಣವಾಗಿದ್ದು ಕರೋನಾ ವಿರುದ್ದದ ಸಮರಕ್ಕೆ ಮಿಂಚೂಣಿಯಾಗಿ ನಿಂತು ನಿಕರವಾದ ಅಂಕಿ ಅಂಶಗಳನ್ನ ನೀಡಿ ಜನಜಾಗ್ರುತಿಯನ್ನ ಕೈಗೊಂಡಿರುವುದು ಹೆಮ್ಮೆಯ ವಿಚಾರ ಎಂದರು
ತಹಶೀಲ್ದಾರ್ ಸತ್ಯನಾರಾಯಣ ಟಿಎಚ್ ಓ ಡಾ ಟಿ ವೆಂಕಟೇಶ್ ಇಓ ಈಶ್ವರ್ ಪ್ರಸಾದ್ ಡಿವೈಎಸ್ಪಿ ರೋಷನ್ ಜಮೀರ್ ಸಿಪಿಐ ರಾಘವೇಂದ್ರ ಪಿಡಿಓ ಶ್ರೀನಿವಾಸ್ ಕಾರ್ಯದರ್ಶಿ ನಾಗೇಂದ್ರಪ್ಪ ಸಿಬ್ಬಂದಿ ಫೈರೋಜ್ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್ ಸಾಕಮ್ಮ ಮುನೀರ್ ಸುಭಾನ್ ಖಾನ್ ನಾಸೀರಾ ಅನ್ನಪೂರ್ಣ ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್ ಇತರರು ಇದ್ದರು.

[t4b-ticker]

You May Also Like

More From Author

+ There are no comments

Add yours