ಪತ್ರಿಕಾ ವಿತರಕರಿಗೆ ಲಸಿಕೆ ನೀಡುತ್ತಿರುವುದು ಉತ್ತಮ ಕಾರ್ಯಕ್ರಮ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ

ಪತ್ರಿಕಾ ವಿತರಕರಿಗೆ ಲಸಿಕೆ ನೀಡುತ್ತಿರುವುದು ಉತ್ತಮ ಕಾರ್ಯಕ್ರಮ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ

Listen to this article

ಚಿತ್ರದುರ್ಗ 27:ಕೋವಿಡ್ ಬೀತಿಯಲ್ಲಿಯೂ ಯಾವುದೇ ಅಳುಕು ಅಂಜಿಕೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಿಕಾ ವಿತರಕರಿಗೆ ಇದು ತುಂಬಾ ಅವಶ್ಯಕ ಕಾರ್ಯಕ್ರಮ ಯಾವುದೇ ಸೊಂಕಿತ ಪ್ರದೇಶದ ಅರಿವಿಲ್ಲದೆ ಬೆಳಿಗ್ಗೆನೇ ಪತ್ರಿಕೆ ತಲುಪಿಸಿ ಜಗತ್ತಿನ ವಿಷಯ ತಲುಪಿಸುವ ನಿಜವಾದ ವಾರಿಯರ್ಸ್‌ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನೀಕೇರಿ ತಿಳಿಸಿದರು.

 

 

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ವಿತರಕರಿಗೆ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಜೀವದ ಹಂಗು ತೊರೆದು ಮನೆ ಮನೆಗೆ ಪತ್ರಿಕೆ ತಲುಪಿಸಿದ್ದ ಯುವಕರು ಲಸಿಕೆಯ ಮಾಹಿತಿ ಮತ್ತು ಮಹತ್ವ ತಿಳಿಸಿ ಕೊಟ್ಟರು
ನಂತರ ಜಿಲ್ಲೆಯ ನೂರಾರು ಪತ್ರಿಕಾ ವಿತರಕರು ಲಸಿಕೆ ಪಡೆದರು.

ಈ ಸಂದರ್ಭದಲ್ಲಿ ಡಿಹೆಚ್ಓ ಫಾಲಾಕ್ಷ,,ಅರ್.ಸಿ ಹೆಚ್. ಅಧಿಕಾರಿ ಕುಮಾರ ಸ್ವಾಮಿ.ವಾರ್ತಾಧಿಕಾರಿ ಧನಂಜಯಪ್ಪ,,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾದ ಡಿ.ಕುಮಾರ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ದಿನೇಶ್ ಗೌಡಗೆರೆ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಚಿತ್ರದುರ್ಗ ಪತ್ರಿಕಾ ಭವನದಲ್ಲಿ ಆರೋಗ್ಯ ಸಿಬ್ಬಂದಿಯಿಂದ ಲಸಿಕೆ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು

Trending Now

Leave a Reply

Your email address will not be published. Required fields are marked *

Trending Now