ಜಿಲ್ಲೆಯ ಆಮ್ಲಜನಕ ಕೊರತೆ ನೀಗಿಸಲು ಸಹಾಯ ಹಸ್ತ ಚಾಚಿದ ಅಮೇರಿಕಾ ಟೆಕ್ಸಾಸ್‍ನ ಕೇರ್ ಐಎನ್‍ಸಿ ಸಂಸ್ಥೆ 20 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಜಿಲ್ಲಾಡಳಿತಕ್ಕೆ ಹಸ್ತಾಂತರ

 

ಚಿತ್ರದುರ್ಗ,ಮೇ.28:
ಚಿತ್ರದುರ್ಗ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗಿಸುವ ಉದ್ದೇಶದಿಂದ ಸಹಾಯ ಹಸ್ತ ಚಾಚಿದ ಅಮೇರಿಕಾ ಟೆಕ್ಸಾಸ್‍ನ ಕೇರ್ ಐಎನ್‍ಸಿ ಸಂಸ್ಥೆಯ ವತಿಯಿಂದ 20 ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು  ಶುಕ್ರವಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಹಾಗೂ ರಿಫಿಲಿಂಗ್ ಸ್ಟೇಷನ್ ಇಲ್ಲ. ಈ ಸಂದರ್ಭದಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಬೆಡ್‍ಗಳಿಗೆ ಆಕ್ಸಿಜನ್ ಅವಶ್ಯಕತೆ ಇದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇಆರ್‍ಎಂ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರವೀಣ್ ಚಂದ್ರ ಅವರು ಅಮೇರಿಕಾ ದೇಶದ ಟೆಕ್ಸಾಸ್ ರಾಜ್ಯದ ಕೇರ್ ಐಎನ್‍ಸಿ ಸಂಸ್ಥೆಯನ್ನು ಸಂಪರ್ಕ ಮತ್ತು ಸಂಯೋಜನೆ ಮಾಡಿ ಜಿಲ್ಲೆಯ ಜನತೆಯ ಆಮ್ಲಜನಕ ಕೊರತೆ ನೀಗಿಸುವಂತೆ ಮನವಿ ಮಾಡಿದಾಗ ಸಕಾಲಕ್ಕೆ ಸ್ಪಂದಿಸಿದ ಕೇಶವ ನಾರಾಯಣ, ಡಾ.ನಾಗರಾಜ್, ಡಾ.ಸ್ವಾಮಿ ಪಿ ಐಯ್ಯರ್ ಅವರು ರೂ. 16 ಲಕ್ಷದ 20 ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದು, ಇದರಿಂದ ಜಿಲ್ಲೆಯ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಆಕ್ಸಿಜನ್ ಕೊರತೆ ಉಂಟಾದಾಗ ತುರ್ತು ಸಂದರ್ಭದಲ್ಲಿ ಕೋವಿಡ್ ಗಂಭೀರ ಪ್ರಕರಣಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟಸ್‍ಗಳು ತುಂಬಾ ಸಹಾಯಕವಾಗಲಿವೆ ಎಂದು ಹೇಳಿದರು.
ಇಆರ್‍ಎಂ ಸಂಸ್ಥೆಯ ವ್ಯವಸ್ಥಾಪಕರಾದ ದೀಪಕ್ ಮಾತನಾಡಿ, ಕೋವಿಡ್-19 ಎಲ್ಲಡೆ ವ್ಯಾಪಕವಾಗಿ ಹರಡುತ್ತಿದ್ದು, ಅನೇಕ ಜನರು ಈ ಜಾಗತಿಕ ಹೆಮ್ಮಾರಿಗೆ ತುತ್ತಾಗುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಹ ಕೋವಿಡ್-19 ವ್ಯಾಪಕವಾಗಿ ಹಬ್ಬುತ್ತಿದ್ದು, ಈ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕ ಅವಶ್ಯಕತೆ ಬಹಳ ಅವಶ್ಯಕತೆ ಇದೆ ಎಂದರು.  
ಅಮೇರಿಕದ ಟೆಕ್ಸಾಸ್‍ನ ಕೇರ್ ಐಎನ್‍ಸಿ ವೃತ್ತಿಪರ ವೈದ್ಯರ ಸಂಘಟನೆಯಾಗಿದೆ. ಭಾರತದಲ್ಲಿ ಕೋವಿಡ್-19 ಅಗತ್ಯತೆಯನ್ನು  ಪೂರೈಸಲು ಸಂಪನ್ಮೂಲಗಳನ್ನು ಒಟ್ಟುಗೂಡಿಸುತ್ತಿದ್ದು ಮತ್ತು ಅವರು ವೈದ್ಯಕೀಯ ಉಪಕರಣಗಳು ಮತ್ತು  ವೃತ್ತಿಪರ ಸೇವೆಯನ್ನು ದೇಶಾದ್ಯಂತ ಸಮಾರೋಪಾದಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಸಾಮಾಗ್ರಿಗಳ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಆರ್‍ಎಂ ಸಮೂಹ ಸಂಸ್ಥೆ ಗ್ರಾಮೀಣ ಸಹಾಯಕ ಜನರಲ್ ಮ್ಯಾನೇಜರ್ ರಣದೀವೆ, ರವಿರಂಗಸ್ವಾಮಿ, ಮ್ಯಾನೇಜರ್ ದೀಪಕ್, ಅಜಿತ್ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours