ಚಳ್ಳಕೆರೆ: ಚಳ್ಳಕೆರೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ ಜನಸಂಖ್ಯೆ ಆಧಾರವಾಗಿ ಮೀಸಲಾತಿ ನೀಡಬೇಕಾದ ಸರಕಾರ ಇಂದು ವಿಫಲವಾಗಿದೆ. ಆದರೆ ಸಂವಿಧಾನಹಕ್ಕುಬದ್ದವಾದ ಹೋರಾಟ ವಿಧಾನ ಸಭೆಯಲ್ಲಿ ಪ್ರತಿಧ್ವನಿಸುತ್ತದೆ. ಆದರೆ ಸರಕಾರ ಆಯಾ ಜಾತಿಗೆ ಅನುಗುಣವಾಗಿ ಸಮುದಾಯದ ಜನತೆಗೆ ಆಧ್ಯತೆ ನೀಡುವ ಮೂಲಕ ಪರಿಶಿಷ್ಟ ಪಂಗಡದ ವರ್ಗದವರಿಗೆ ಶೇಕಡ 7.5 ರಷ್ಟು ಮೀಸಲಾತಿ ನೀಡಬೇಕು. ಸರ್ಕಾರ ವರದಿ ಎಲ್ಲಾ ತರಿಸಿಕೊಂಡಿದ್ದರು ಸಹ ಮೀಸಲಾತಿ ಹೆಚ್ಚಿಸುವಲ್ಲಿ ಮೀನಮೇಷ ಏಣಿಸುತ್ತಿದೆ ಅದೇ ರೀತಿಯಲ್ಲಿ ನಮ್ಮ ಸಹೋದರ ಸಮಾಜವಾದ ಪರಿಶಿಷ್ಟ ಜಾತಿಗೂ ಮಿಸಲಾತಿ ಹೆಚ್ಚಳ ಮಾಡಬೇಕು ನ್ಯಾಯ ಒದಗಿಸುವ ಕೆಲಸ ಆಗಬೇಕಿದೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
[t4b-ticker]
+ There are no comments
Add yours