ಇದು ನಟಿ‌ ಆರತಿ ಬಯೋಫಿಕ್ ಪೋಸು ಅಲ್ಲದಿರಬಹುದು, ಆದ್ರೆ ರಂಗ ನಾಯಕಿ‌ ಕುರಿತು ಸಿನಿಮಾ‌ ಮಾಡಿದರೆ ಆ ಕಥೆ ಹೇಗಿರುತ್ತೆ ಗೊತ್ತಾ?

 

 

ಇದು ನಟಿ‌ ಆರತಿ ಬಯೋಫಿಕ್ ಪೋಸು ಅಲ್ಲದಿರಬಹುದು, ಆದ್ರೆ ರಂಗ ನಾಯಕಿ‌ ಕುರಿತು ಸಿನಿಮಾ‌ ಮಾಡಿದರೆ ಆ ಕಥೆ ಹೇಗಿರುತ್ತೆ ಗೊತ್ತಾ?

ಕನ್ನಡದ ಹಿರಿಯ ನಟಿ‌ ‌ರಂಗ ನಾಯಕಿ ಖ್ಯಾತಿಯ ಆರತಿ ಈಗ ಎಲ್ಲಿದ್ದಾರೆ ? ಏನ್ ಮಾಡ್ತಿದ್ದಾರೆ ? ಚಿತ್ರರಂಗದಿಂದ ಅವರು ಅಷ್ಟು ದೂರ ಯಾಕೆ ಹೋದರು? ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಇಲ್ಲ. ಯಾಕಂದ್ರೆ ಅವರು ನಟನೆಯಿಂದ ದೂರ ಉಳಿದು ಹಲವು ವರ್ಷಗಳೇ ಆಗಿ ಹೋದವು. ಹಾಗಾಗಿ ಈಗವರು ಎಲ್ಲಿದ್ದಾರೆನ್ನುವ ಸಿನಿಮಾ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆಯೇ ಈಗ ಒಂದು ಸುದ್ದಿ ಹರಿದಾಡತೊಡಗಿದೆ. ಆರತಿ ಬಯೋಪಿಕ್ ತೆರೆ ಮೇಲೆ ಬರುತ್ತಿದೆಯಾ ಎನ್ನುವುದು ಆ‌ಸುದ್ದಿ.‌

 

 

ಸಿನಿಮಾ ಭಾಷೆಯಲ್ಲಿ ಹಾಗೊಂದು ಗಾಸಿಪ್ ಹರಿದಾಡುತ್ತಿದೆ. ಅದಕ್ಕೆ ಕಾರಣ ನಟಿ‌ ಅನುಪಮಾ ಗೌಡ ಅವರ ಒಂದು ಫೋಟೋ. ವಿಷಯಕ್ಕೆ ಬರುವ ಒಮ್ಮೆ ನೀವು ಈ ಫೋಟೋ ಗಮನಿಸಿನೋಡಿ. ಅನುಪಮಾ ಅವರ ಫೋಟೋಗೂ ಮತ್ತು ಹಿರಿಯ ನಟಿ ಆರತಿ ಅವರ ಫೋಟೋಗೋ ಹಲವು ಹೋಲಿಕೆಗಳಿವೆ. ಸಾಮಾನ್ಯವಾಗಿ‌ ಬಯೋಫಿಕ್ ಅಂತ ಸದ್ದು ಆದಾಗ ಕಂಡಿದ್ದು ಹೀಗೆ ಅಲ್ಲವೇ? ಇತ್ತೀಚೆಗೆ ಸೌತ್ ಸಿನಾ ಜಗತ್ತಿನಲ್ಲಿ ಜಯಲಲಿತಾ ಅವರ ಬಯೋಪಿಕ್ ದೊಡ್ಡ ಸದ್ದು ಮಾಡಿದಾಗ ಕಂಗನಾ ಕಾಣಿಸಿಕೊಂಡಿದ್ದು ಹೀಗೆ ಅಲ್ಲವೇ?

ಗೊತ್ತಿಲ್ಲ,ನಟಿ , ನಿರೂಪಕಿ ಅನುಪಮಾ ಗೌಡ ಯಾವ ಕಾರಣಕ್ಕಾಗಿ ಕ್ಯಾಮೆರಾ ಮುಂದೆ ಇಂತಹದೊಂದು ಫೋಸು ಕೊಟ್ಟಿದ್ದಾರೋ ಗೊತ್ತಿಲ್ಲ, ಆದರೆ ಅದು ಥೇಟ್ ಆರತಿ‌ ಅವರ ಒಂದು ಗೆಟಪ್ ನಂತೆಯೇ ಇದೆ‌ . ಆರತಿ ಅವರು ಇರೋದೆ ಹಾಗೆ. ಹಾಗಾದ್ರೆ ಅನುಪಮಾ ಗೌಡ ಅವರು ಕ್ಯಾಮೆರಾ ಮುಂದೆ ಕೊಟ್ಟ ಪೋಸು ಆರತಿ ಅವರ ಗೆಟಪ್ ಅಲ್ಲದಿರಬಹುದು, ಆದರೆ ಆರತಿ ಅವರ ಕುರಿತು ಸಿನಿಮಾ ಮಾಡ ಹೊರಟರೆ ಒಂದಲ್ಲ ಮೂರ್ನಾ ಲ್ಕು ಸಿಕ್ವೆಲ್ ಮಾಡುವಷ್ಟು ಸಾಧನೆಯ ಜತೆಗಿನ ವಿಶಿಷ್ಟ ಬದುಕು ಅವರದು. ಅದು ಅವರ ಅದೃಷ್ಟವೋ, ದುರಾದೃ ಷ್ಟವೋ ನಟಿಯಾಗಿ ಗೆದ್ದ ಆರತಿ ಖಾಸಗಿ ಬದುಕಿನಲ್ಲಿ‌ ನೆಮ್ಮದಿ ಕಾಣಲಿಲ್ಲ ಎನ್ನುವುದು ಉದ್ಯಮವೇ ಹೇಳುವ ಮಾತು. ಅದೊಂದು‌ ಸಿನಿಮಾ ಕಥಾನಕ !

ಅದೇ ಕಾರಣಕ್ಕೆ ಸದ್ದಿಲ್ಲದೆ ಸುದ್ದಿಯೂ ಆಗದೆ ಹಿರಿಯ ನಟಿ ಆರತಿ ಅವರ ಬಯೋಪಿಕ್ ತೆರೆಗೆ ಬರುತ್ತಿದೆಯಾ ಎನ್ನುವ ಗುಮಾನಿ ಈಗ ನಟಿ‌ ಅನುಪಮಾ ಗೌಡ ಅವರ ಪೋಸು ನೋಡಿದಾಗ ಅನಿಸಿದ್ದು ಹೌದು. ಮೂಲಗಳ ಪ್ರಕಾರ ಅದು ರಾಜ ರಾಣಿ ಹೆಸರಿನ ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಕೊಟ್ಟ ಪೋಸ್ ಅಂತೆ. ಹೀಗಂತ ಈಗ ಸುದ್ದಿ ಹರಿದಾಡುತ್ತಿದೆ. ಇರಲಿ, ಅದು ಅಲ್ಲಿದೆ ಆಂತಿಟ್ಟುಕೊಳ್ಳೊಣ, ಆರತಿ ಅವರ ಬಯೋಪಿಕ್ ಸಿನಿಮಾ ಮಾಡಲು ಯಾರಾದರೂ ಮನಸು ಮಾಡಿದರೆ ಯಾಕೆ ನಟಿ‌ಅನುಪಮಾ‌ಗೌಡ ಅದರಲ್ಲಿ‌ನಟಿಸಬಾರದು? ಸಿನಿಮಾ‌ಮಂದಿ ಅವರನ್ನೇ ಯಾಕೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಬಾರದು?

You May Also Like

More From Author

+ There are no comments

Add yours